EducareInfo

ಗೆಳೆಯರೇ ಪಿಡಿಓ ಹುದ್ದೆಗಳಿಗೆ ನೇಮಕಾತಿ? ಕೂಡಲೇ ಅರ್ಜಿಯನ್ನು ಸಲ್ಲಿಸಿ..!

KPSC PDO 2024 ಹುದ್ದೆಗಳ ನೇಮಕಾತಿ:247 ಹುದ್ದೆಗಳಿಗೆ ಅರ್ಜಿ ಪುನರಾರಂಭ:

ನಮಸ್ಕಾರ ಎಲ್ಲರಿಗೂ ನಾವು ಈ ವರದಿಯ ಮೂಲಕ ತಿಳಿಸುವುದೇನೆಂದರೆ. ಕರ್ನಾಟಕ ಲೋಕಸೇವಾ ಆಯೋಗದ(kPSC) ಪಂಚಾಯತ ಅಭಿವೃದ್ಧಿ ಅಧಿಕಾರಿಗಳ(PDO) ನೇಮಕಾತಿ.2024(PSC ಹಾಗೂ PDO Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಗೆಳೆಯರೇ ಈಗಾಗಲೇ ಈ ಹುದ್ದೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತವಾದ ಉದ್ಯೋಗಾವಕಾಶ ಅಂತ ಹೇಳಬಹುದು. ಈ ಹುದ್ದೆಗೆ ನೀವು ಆಸಕ್ತಿ ಹೊಂದಿದರೆ ಕೆಳಗಿರುವ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬಹುದು. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿ ತಿಳಿದುಕೊಂಡು. ಉದ್ಯೋಗಾವಕಾಶ ಪಡೆದುಕೊಳ್ಳುವಲ್ಲಿ ಅವಕಾಶ ನಿಮ್ಮದಾಗಲಿ. ಹಾಗೆ ಇನ್ನಷ್ಟು ಇದೇ ತರದ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗಿರುವ ನಮ್ಮ ಟೆಲಿಗ್ರಾಂ ಚಾನಲ್ಗೆ ಜಾಯಿನ್ ಆಗಿ.

ಕರ್ನಾಟಕ ಲೋಕಸೇವಾ ಆಯೋಗದ (KPSC) ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ನೇಮಕಾತಿ 2024

ನಮಸ್ಕಾರ ಸ್ನೇಹಿತರೆ ಕರ್ನಾಟಕದ ಲೋಕಸೇವಾ ಆಯೋಗದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ (PDO) ನೇಮಕಾತಿಗಾಗಿ ಈಗಾಗಲೇ ಪ್ರಕಟಿಸಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಮತ್ತೊಂದು ಹೊಸ ಅವಕಾಶವನ್ನು ನೀಡಿದೆ. ಕೆಲವು ಹುದ್ದೆಗಳಿಗೆ ಮೂರು ವರ್ಷಗಳ ಸಡಿಲೀಕೆ ಒದಗಿಸುವ ಮೂಲಕ ಇತ್ತೀಚಿನ ಸರ್ಕಾರದ ಆದೇಶದ ಬೆಳಕಿನಲ್ಲಿ ಈ ನಿರ್ಧಾರ ಮೂಡಿ ಬಂದಿದೆ.

ಪ್ರಮುಖ ವಿವರಗಳು ಈ ಕೆಳಗಿನಂತಿವೆ..?

ಒಟ್ಟು ಕಾಲಿರುವ ಹುದ್ದೆಗಳು:247(ಅದರಲ್ಲಿ ಸಾಮಾನ್ಯ 150 ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 97) ಅಪ್ಲಿಕೇಶನ್ ಅವಧಿ: ಸೆಪ್ಟೆಂಬರ್ 18ರಿಂದ ಅಕ್ಟೋಬರ್ 3, 2024ರ ಒಳಗೆ.ವಯಸ್ಸಿನ ಸಡಿಲಿಕೆ: ಸೆಪ್ಟೆಂಬರ್ 10,2024ರ ಸರ್ಕಾರಿ ಆದೇಶ ಸಂಖ್ಯೆ ಎಂದರೆCSE 166 SEN 2024 ರ ಪ್ರಕಾರ, ಎಲ್ಲ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಒಂದು ಬಾರಿ ಒದಗಿಸಿಕೊಟ್ಟಿದೆ.

‌ ಪರಿಸ್ಕೃತ ವಯಸ್ಸಿನ ಅರ್ಹತೆ ಎಷ್ಟಿರಬೇಕು …?

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಯ ವಯಸ್ಸು ಅಕ್ಟೋಬರ್ 3 2024 ರೊಳಗೆ ಕೆಳಗಿನ ವಯಸ್ಸಿನ ಮಾನದಂಡಗಳನ್ನು ಪೂರೈಸಬೇಕು. ಕನಿಷ್ಠ ವಯಸ್ಸು:18 ವರ್ಷಗಳು ಆಗಿರಬೇಕು ಗರಿಷ್ಠ ವಯಸ್ಸು: ಸಾಮಾನ್ಯ ವರ್ಗದವರಿಗೆ:38 ವರ್ಷಗಳು ಹಾಗೂ ಇತರ ವರ್ಗಗಳಿಗೆ ಅಂದರೆ2A,2B,3A,3B 41 ವರ್ಷಗಳು ವಯಸ್ಸಿನ ಸಡಿಲಿಕ್ಕೆ ಇರುತ್ತದೆ. ಮತ್ತು ಮತ್ತು ಎಸ್ಸಿ ಎಸ್ಟಿ ಜನಾಂಗದವರಿಗೆ:43 ವರ್ಷಗಳು

ಶೈಕ್ಷಣಿಕ ಅರ್ಹತೆ?

PDO ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರಬೇಕು. ಹಾಗೂ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ದವರಿಗೆ: 600ಇತರ ಹಿಂದುಳಿದ ವರ್ಗದವರಿಗೆ: 300ಮಾಜಿ ಸೈನಿಕರಿಗೆ: 50SC/ ST/ CATEGORY, ಪಾವತಿಯಿಂದ ವಿನಯ್ತಿ ನೀಡಲಾಗಿದೆ.

ಆಯ್ಕೆ ಮಾಡುವ ವಿಧಾನ

ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮತ್ತು ತಮ್ಮ ಎಸ್ ಎಸ್ ಎಲ್ ಸಿ(ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್) ಅಥವಾ ತತ್ಸಮಾನದಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿದವರಿಗೆ ಈ ಒಂದು ಪರೀಕ್ಷೆ ಅಗತ್ಯವಿದೆ. ಇದೇ ರೀತಿ ಇನ್ನಷ್ಟು ಸರ್ಕಾರದಿಂದ ಬರುವ ಯೋಜನೆಗಳು ಮತ್ತು ಸರ್ಕಾರಿ ನೌಕರಿಗಳು ಬಗ್ಗೆ ನಮ್ಮ ಈ ಮಾಧ್ಯಮದಲ್ಲಿ ಹೇಳುತ್ತಿರುತ್ತೇವೆ ಅದಕ್ಕಾಗಿ ನೀವು ಟೆಲಿಗ್ರಾಂ ಚಾನಲ್ ಅಥವಾ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಧನ್ಯವಾದಗಳು

Exit mobile version